ಮೂರು ಬ್ಯಾಟರಿ ಆಯ್ಕೆಗಳು
Konarc S ಮಾದರಿಯಲ್ಲಿ 2.1 kWh, 2.7 kWh ಮತ್ತು 3.5 kWh ಬ್ಯಾಟರಿ ಆಯ್ಕೆಗಳಿವೆ. ಇವು ಕ್ರಮವಾಗಿ 100 ಕಿ.ಮೀ, 125 ಕಿ.ಮೀ ಮತ್ತು 161 ಕಿ.ಮೀ IDC ರೇಂಜ್ ನೀಡುತ್ತವೆ. ನೈಜ ಬಳಕೆಯ TrueRange ಕ್ರಮವಾಗಿ ಸುಮಾರು 80 ಕಿ.ಮೀ, 100 ಕಿ.ಮೀ ಮತ್ತು 130 ಕಿ.ಮೀ ಎಂದು Ather ತಿಳಿಸಿದೆ. ಸ್ಕೂಟರ್‌ನಲ್ಲಿ PMSM ಮೋಟಾರ್ ಬಳಸಲಾಗಿದ್ದು, 125 km ಮತ್ತು 161 km ಆವೃತ್ತಿಗಳಲ್ಲಿ ಗರಿಷ್ಠ 4.7 kW ಪೀಕ್ ಪವರ್ ಮತ್ತು 16 Nm ಟಾರ್ಕ್ ದೊರೆಯುತ್ತದೆ. S ಮಾದರಿಗಳ ಗರಿಷ್ಠ ವೇಗ 70 kmph ಆಗಿದೆ.
ಮೆಟಲ್ ಬಾಡಿ ಮತ್ತು ದೊಡ್ಡ ವೀಲ್‌ಬೇಸ್
Ather Konarcನ ಪ್ರಮುಖ ವಿಶೇಷತೆಗಳಲ್ಲಿ ಅದರ ಮೆಟಲ್ ಬಾಡಿ ಮತ್ತು ಸ್ಟೀಲ್ ಯುನಿಬಾಡಿ ಚಾಸಿಸ್ ಪ್ರಮುಖವಾಗಿವೆ. ಸ್ಕೂಟರ್‌ನಲ್ಲಿ 14-ಇಂಚಿನ ಅಲಾಯ್ ವೀಲ್‌ಗಳನ್ನು ಬಳಸಲಾಗಿದೆ. ಇದರ 1,352 mm ವೀಲ್‌ಬೇಸ್ Atherನ ಇತರೆ ಸ್ಕೂಟರ್‌ಗಳಿಗಿಂತ ಉದ್ದವಾಗಿದ್ದು, ಉತ್ತಮ ಸ್ಥಿರತೆ ಮತ್ತು ಆರಾಮದಾಯಕ ರೈಡಿಂಗ್ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಮುಂಭಾಗದಲ್ಲಿ 90 mm ಮತ್ತು ಹಿಂಭಾಗದಲ್ಲಿ 100 mm ಸಸ್ಪೆನ್ಷನ್ ಟ್ರಾವೆಲ್ ನೀಡಲಾಗಿದೆ.
ಪ್ರಮುಖ ಫೀಚರ್‌ಗಳು
Ather Konarcನಲ್ಲಿ ದೈನಂದಿನ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಫೀಚರ್‌ಗಳನ್ನು ನೀಡಲಾಗಿದೆ. 7-ಇಂಚಿನ DeepView ಡಿಸ್ಪ್ಲೇ 14-ಇಂಚಿನ ಅಲಾಯ್ ವೀಲ್‌ಗಳು ಮೆಟಲ್ ಬಾಡಿ ಲಾಂಗ್-ಟ್ರಾವೆಲ್ ಸಸ್ಪೆನ್ಷನ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ರೈಡಿಂಗ್ ಮೋಡ್‌ಗಳು ನ್ಯಾವಿಗೇಷನ್ ಮತ್ತು ರೈಡರ್ ಅಲರ್ಟ್‌ಗಳು 31-ಲೀಟರ್ ಬೂಟ್ ಸ್ಪೇಸ್ AirWalk ಫೀಚರ್ MagicKey ಮೂಲಕ ಬೂಟ್ ಪ್ರವೇಶ ಸುಧಾರಿತ ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್ ಇನ್‌ಬಿಲ್ಟ್ ಚಾರ್ಜಿಂಗ್ ವ್ಯವಸ್ಥೆ
ವೇಗದ ಚಾರ್ಜಿಂಗ್ ಮತ್ತು ಕಡಿಮೆ ನಿರ್ವಹಣೆ
ಹೊಸ EL ಪ್ಲಾಟ್‌ಫಾರ್ಮ್‌ನಲ್ಲಿ ಚಾರ್ಜಿಂಗ್ ವ್ಯವಸ್ಥೆ ಮತ್ತು ನಿರ್ವಹಣೆಯನ್ನು ಸರಳಗೊಳಿಸುವತ್ತ Ather ಗಮನಹರಿಸಿದೆ. Konarcನಲ್ಲಿ ಒಟ್ಟು 1.35 kW ವರೆಗೆ combined charging ಸಾಮರ್ಥ್ಯವಿದ್ದು, ದೈನಂದಿನ ಬಳಕೆಯಲ್ಲಿ ವೇಗವಾಗಿ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ. ಸರ್ವಿಸ್ ಇಂಟರ್ವಲ್ ಅನ್ನು 10,000 ಕಿ.ಮೀಗೆ ವಿಸ್ತರಿಸಲಾಗಿದೆ.
ಬ್ಯಾಟರಿ ವಾರಂಟಿ
Konarcಗೆ ಸ್ಟ್ಯಾಂಡರ್ಡ್ ಆಗಿ 3 ವರ್ಷ ಅಥವಾ 30,000 ಕಿ.ಮೀ ಬ್ಯಾಟರಿ ವಾರಂಟಿ ನೀಡಲಾಗುತ್ತದೆ. AtherStack Pro ಆಯ್ಕೆ ಮಾಡಿದರೆ ಬ್ಯಾಟರಿ ವಾರಂಟಿ 5 ವರ್ಷ ಅಥವಾ 60,000 ಕಿ.ಮೀಗೆ ವಿಸ್ತರಿಸುತ್ತದೆ. ಹೆಚ್ಚುವರಿಯಾಗಿ, 8 ವರ್ಷ/80,000 ಕಿ.ಮೀ ಮತ್ತು 10 ವರ್ಷ/1,00,000 ಕಿ.ಮೀ ವರೆಗೆ Extended Battery Warranty ಆಯ್ಕೆಗಳೂ ಲಭ್ಯವಿವೆ.
ಡೆಲಿವರಿ ಯಾವಾಗ ಪ್ರಾರಂಭ?
ಪ್ರಸ್ತುತ Konarc S 125 km ಮತ್ತು S 161 km ಆವೃತ್ತಿಗಳು ಆರಂಭದಲ್ಲಿ ಮಾರಾಟಕ್ಕೆ ಬರಲಿವೆ. ಆಯ್ದ ರಾಜ್ಯಗಳಲ್ಲಿ ಬುಕ್ಕಿಂಗ್ ಮತ್ತು ಡೆಲಿವರಿಗಳು ಸೆಪ್ಟೆಂಬರ್ ಮಧ್ಯಭಾಗದಿಂದ ಹಂತ ಹಂತವಾಗಿ ಪ್ರಾರಂಭವಾಗಲಿವೆ. ನಂತರ ಹೆಚ್ಚಿನ ನಗರಗಳಿಗೆ ಮಾರಾಟ ವಿಸ್ತರಿಸಲಾಗುತ್ತದೆ.
TVS iQube ಮತ್ತು Bajaj Chetakಗೆ ಹೊಸ ಪ್ರತಿಸ್ಪರ್ಧಿ
₹1 ಲಕ್ಷದ ಆಸುಪಾಸಿನಲ್ಲಿ ಆರಂಭವಾಗುವ ಬೆಲೆಯೊಂದಿಗೆ Ather Konarc ನೇರವಾಗಿ ಭಾರತದ ಜನಪ್ರಿಯ ಫ್ಯಾಮಿಲಿ ಮತ್ತು ಕಮ್ಯೂಟರ್ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗಕ್ಕೆ ಪ್ರವೇಶಿಸಿದೆ. TVS iQube, Bajaj Chetak ಸೇರಿದಂತೆ ಪ್ರಮುಖ ಮಾದರಿಗಳಿಗೆ Konarc ಹೊಸ ಪ್ರತಿಸ್ಪರ್ಧಿಯಾಗಲಿದೆ. Atherನ 450 ಸರಣಿ ಮತ್ತು Rizta ಮಾದರಿಗಳಿಗಿಂತ ಕಡಿಮೆ ಬೆಲೆಯ ವಿಭಾಗದಲ್ಲಿ Konarc ಅನ್ನು ಇರಿಸಲಾಗಿದ್ದು, ಕಂಪನಿಯು ಹೆಚ್ಚಿನ ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ.
ಕಿರು ನೋಟ
ಮಾದರಿ: Ather Konarc S ಆರಂಭಿಕ ಬೆಲೆ: ₹99,999 ಗರಿಷ್ಠ IDC ರೇಂಜ್: 161 ಕಿ.ಮೀ (ಪ್ರಸ್ತುತ ಲಭ್ಯವಿರುವ ಮಾದರಿ) ಮುಂದಿನ ಆವೃತ್ತಿ: 200 ಕಿ.ಮೀ IDC ಗರಿಷ್ಠ ಪವರ್: 4.7 kW ಗರಿಷ್ಠ ಟಾರ್ಕ್: 16 Nm ಗರಿಷ್ಠ ವೇಗ: 70 kmph (S ಸರಣಿ) ಬ್ಯಾಟರಿ: 2.1 / 2.7 / 3.5 kWh ವೀಲ್‌ಬೇಸ್: 1,352 mm ಬೂಟ್ ಸ್ಪೇಸ್: 31 ಲೀಟರ್ ಬಾಡಿ: ಮೆಟಲ್ ಪ್ಲಾಟ್‌ಫಾರ್ಮ್: Ather EL
ಬೆಲೆ ಎಸ್ಟಂತೇ???
Ather Konarc ಅನ್ನು ವಿವಿಧ ಬ್ಯಾಟರಿ ಮತ್ತು ರೇಂಜ್ ಆಯ್ಕೆಗಳೊಂದಿಗೆ ಪರಿಚಯಿಸಲಾಗಿದೆ. ಪ್ರಸ್ತುತ ಘೋಷಿಸಲಾದ ಬೆಲೆಗಳು ಹೀಗಿವೆ: Konarc S 100 km: ₹99,999 Konarc S 125 km: ₹1,21,999 Konarc S 161 km: ₹1,44,999 ಇವು ಬೆಂಗಳೂರಿನ ಎಕ್ಸ್-ಶೋರೂಂ ಬೆಲೆಗಳಾಗಿವೆ. 200 ಕಿ.ಮೀ IDC ರೇಂಜ್ ಹೊಂದಿರುವ ಆವೃತ್ತಿಯನ್ನೂ Ather ಮುಂದಿನ ಹಂತದಲ್ಲಿ ಪರಿಚಯಿಸಲು ಸಿದ್ಧವಾಗಿದೆ.

